Category: ಕನ್ನಡ ಸಾಹಿತ್ಯ ಪ್ರಕಾರಗಳು
ಎ . ಆರ್ . ಕೃಷ್ಣಶಾಸ್ತ್ರಿ, ಎಂ. ಎ . ಅವರ “ಸಂಸ್ಕೃತ ನಾಟಕ” – (೧೯೩೭) ಪುಸ್ತಕದಿಂದ ಸಂಗ್ರಹಿಸಿದ್ದು ನಾಟಕಪ್ರಪಂಚ ಮತ್ತು ನಾಟಕ ಪ್ರೇಮಿಗಳು ನಾಟಕಪ್ರೇಮಿಗಳು ಸಾಧಾರಣವಾಗಿ ಪ್ರಪಂಚದ ಮೂರೂ ಮುಖ್ಯ ನಾಟಕ ಸಾಹಿತ್ಯಗಳನ್ನು ನೋಡಬೇಕು. ಅವು ಯಾವುವೆಂದರೆ – ಸಂಸ್ಕೃತ, ಗ್ರೀಕ್ ಮತ್ತು ಇಂಗ್ಲಿಷ್....
ಪೀಠಿಕೆ: “ಕಾವ್ಯೇಷು ನಾಟಕಂ ರಮ್ಯಂ’ – ಎಂಬುದು ಭರತ ಖಂಡದಲ್ಲಿ ಗಾದೆಯಂತಿರುವ ಒಂದು ಸೂಕ್ತಿ. ಕಾವ್ಯಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು, ನಾಟಕದಲ್ಲಿ ಸಂಗೀತ, ಸಾಹಿತ್ಯ, ಅಭಿನಯಗಳ ಜೊತೆಗೆ ನರ್ತನವೂ ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ. “ನಾಟಕ’ವೆ೦ಬ ಪದವೇ ““ನಟ್’ ಎ೦ಬ ಧಾತುವಿನಿಂದ ಬ೦ದುದೆಂದೂ “ನಟ್’ ಎಂಬುದು ನೃತ್ಯ...
ಒಂದು ವಸ್ತುವನ್ನು ತೆಗೆದುಕೊಂಡು, ಆ ವಸ್ತುವಿನ ಕಥೆಯನ್ನು ಕವನ ರೂಪದಲ್ಲಿ ಸುಂದರವಾಗಿ ಮೂಡಿಸುವುದೇ ‘ಕಥನ ಕವನ’. ಈ ಕವನದಲ್ಲಿ ಕಥೆಯು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಈ ರೀತಿಯ ಕವನಗಳಲ್ಲಿ ಛಂದಸ್ಸಿಗಿ೦ತ ಕಥೆಗೇ ಹೆಚ್ಚು ಮಹತ್ವ. ಕಥೆಯ ವಸ್ತುವಿಗೆ ಅನುಗುಣವಾಗಿ ಅರ್ಥ ಪರಿಣಾಮದ ಕಡೆಗೆ ಗಮನವಿಟ್ಟು ಛಂದಸ್ಸು ರೂಪಿತವಾಗುತ್ತದೆ. ಜನಪದ...
ಚಂಪೂ, ತ್ರಿಪದಿ, ರಗಳೆ, ಷಟ್ಟದಿ ಈ ಮೊದಲಾದ ಛಂದೋರೂಪಗಳ ನ೦ತರ ಬಂದ ಸಾಂಗತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಫವಾದ ಇತಿಹಾಸವನ್ನು ಹೊಂದಿದೆ. ಈ ದೇಶಿಯ ಕಾವ್ಯ ಪ್ರಕಾರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು ರಚಿತಗೊಂಡಿವೆ. ಆಧುನಿಕ ಕಾಲದಲ್ಲೂ ಈ ಪ್ರಕಾರ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಳೆ, ತ್ರಿಪದಿ, ಅಕ್ಕರ...
ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. ಶಿಷ್ಟ ಕವಿಗಳ ಆದರಕ್ಕೂ ಒಳಗಾಗಿರುವ ಈ ಕಾವ್ಯ ಪ್ರಕಾರದ ಮೂಲವನ್ನು ಜನಪದರ “ಗರತಿಯ ಹಾಡು’ಗಳಲ್ಲಿ ಕಾಣಬಹುದಾಗಿದೆ. ಏಳನೆಯ ಶತಮಾನದ...
ಸಾಹಿತ್ಯದ ಪ್ರಕಾರಗಳಲ್ಲಿ ಶತಕ ಸಾಹಿತ್ಯವೂ ಒಂದು. ಇದಕ್ಕೆ ಪ್ರಾಚೀನ ಹಿನ್ನೆಲೆಯಿದೆ ಮತ್ತು ಆಧುನಿಕ ಯುಗದವರೆಗೆ ಅದರ ಮುನ್ನೋಟವಿದೆ. ಇದೊಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸಾಹಿತ್ಯ ಪ್ರಕಾರ. ಶತಕವೆಂದರೆ ನೂರು ಪದ್ಯಗಳ ಚಿಕ್ಕ ಕಾವ್ಯ. ನೂರು ಪದ್ಯಗಳ ಗುಚ್ಚಕ್ಕೆ ಶತಕವೆಂದು ಕರೆದಿದ್ದರೂ ನೂರೇ ಎಂಬ ನಿರ್ದಿಷ್ಟತೆ ಇದ್ದಂತಿಲ್ಲ. ೧೦೦...
13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ಬಂದಿರ್ಕಾರಂತ್ಯದೊಳ್ಕುಂದದೆ ನೆಲಸುಗೆ ಮದನಹರಂಇಂದುನಿಭಾನನೆಮುಂದಣ ಪದವೀಯಂದಮೆಯಾಗಕಲ್ಕೆ ಷಟ್ಪದಿಕೇಳ್ ಇದರ...
ರಗಳೆ ಕನ್ನಡದ ವಿಶೇಷವಾದ ಪದ್ಯಜಾತಿ. ಪ್ರಸಿದ್ಧವಾದ ದೇಶೀಯ ಛಂದಸ್ಸು. ಇದನ್ನು ರಘಟಾ, ರಗಡಾ, ಪದ್ದಳಿ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಈ ಪದ್ಯಜಾತಿಯಲ್ಲಿ ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳೆ ಎಂಬ ಮೂರು ಪ್ರಭೇದಗಳಿವೆ. ಹಳಗನ್ನಡ ಕಾವ್ಯಗಳಲ್ಲಿ ಒಂದನೇ ನಾಗವರ್ಮನ “ಛಂದೋಂಬುಧಿ’ಯಲ್ಲಿ ಮೊದಲ ಬಾರಿಗೆ ಇದರ ಪ್ರಸ್ತಾಪ ಬಂದಿದೆ. ಜಯಕೀರ್ತಿಯು ತನ್ನ “ಛ೦ದೋನುಶಾಸನ’ದಲ್ಲಿ ಇದನ್ನು...
“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು ಯಶಸ್ವಿಯಾಗಿ ಬಳಸಿದ್ದಾರೆ. ಚಂಪೂ ಪ್ರಧಾನವಾಗಿ ಪದ್ಯ-ಗದ್ಯಗಳಿ೦ದ ಕೂಡಿರುತ್ತದೆ. “ಚಂಪೂ’ ಎನ್ನುವುದಕ್ಕೆ ಸುಂದರವಾದದ್ದು, ಮನೋಹರವಾದದ್ದು ಎ೦ಬ ಅರ್ಥವಿದೆ. ಕನ್ನಡದಲ್ಲಿ ಚಂಪೂ...