ಷಟ್ಪದಿ ಸಾಹಿತ್ಯ ಪ್ರಕಾರ
13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ಬಂದಿರ್ಕಾರಂತ್ಯದೊಳ್‌ಕುಂದದೆ ನೆಲಸುಗೆ ಮದನಹರಂಇಂದುನಿಭಾನನೆಮುಂದಣ ಪದವೀಯಂದಮೆಯಾಗಕಲ್ಕೆ ಷಟ್ಪದಿಕೇಳ್ ಇದರ...